ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇಂಧು ಕೆಲವೇ ಕ್ಷಣಗಳಲ್ಲಿ ದಿನಾಂಕ ಪ್ರಕಟಗೊಳ್ಳಲಿರುವ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲು ಸಿಎಂ ಸಿದ್ದರಾಮಯ್ಯ ಬಾಕಿ ಇರುವ ಕಡತಗಳ ವಿಲೇವಾರಿಗೆ ಮುಂದಾಗಿದ್ದಾರೆ. ತಮ್ಮ ಕಚೇರಿಯಲ್ಲಿ ಕುಳಿತು, ಸಚಿವ ವಿನಯ್ ಕುಲಕರ್ಣಿ, ಗೃಹ ಸಚಿವ ರಾಮಲಿಂಗಾ ರೆಡ್ಡಿ ಜತೆಗೂಡಿ ಸಿಎಂ ಸಿದ್ದರಾಮಯ್ಯ ಧಾವಂತದಲ್ಲಿ ಕಡತಗಳಿಗೆ ಸಹಿ ಹಾಕುತ್ತಿದ್ದಾರೆ. ಒಂದು ವೇಳೆ ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಯಾವುದೇ ಆಡಳಿತಾತ್ಮಕ ಕೆಲಸಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ.ಈ