ಬೆಳಗಾವಿ: ಖಾಸಗಿ ವೈದ್ಯರ ವಿಧೇಯಕ ಮಂಡನೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ಅತ್ತ ಸಚಿವ ರಮೇಶ್ ಕುಮಾರ್ ಬೆದರಿಕೆ, ಇತ್ತಖಾಸಗಿ ವೈದ್ಯರ ಬೆದರಿಕೆ.. ಅಂತೂ ಇಬ್ಬರನ್ನೂ ಸಮಾಧಾನಪಡಿಸುವ ಸ್ಥಿತಿ ಸಿಎಂರದ್ದಾಗಿದೆ. ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿರಬೇಕಾದರೆ, ಹೊರಗೆ ನೂರಾರು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಖಾಸಗಿ ವೈದ್ಯರ ಮೇಲೆ ಅಂಕುಶ ಹೇರುವ ವಿದೇಯಕ ಮಂಡನೆಯಾಗಬಾರದು ಎಂದು ಒತ್ತಾಯಿಸುತ್ತಿದ್ದಾರೆ.ಆದರೆ ಇತ್ತ ಆರೋಗ್ಯ ಸಚಿವ ರಮೇಶ್ ಕುಮಾರ್ ಸಾಕಷ್ಟು ಚಿಂತನೆ ನಡೆಸಿ,