ಬೆಂಗಳೂರು: ದೇಶದಲ್ಲಿ ಸದ್ಯಕ್ಕೆ ಮೋದಿಗೆ ಸರಿಸಮರಾದ ನಾಯಕರೆಂದರೆ ಸಿಎಂ ಸಿದ್ದರಾಮಯ್ಯ. ಮುಂದೊಂದು ದಿನ ಅವರೇ ದೇಶದ ಪ್ರಧಾನಿ ಆಗಲಿ. ಕರಿಕೋಟು ಹಾಕಿಕೊಂಡು ಕೆಂಪುಕೋಟೆಯಲ್ಲಿ ಧ್ವಜ ಹಾರಿಸುವುದಾದರೆ ನಾವೆಲ್ಲಾ ಬೆಂಬಲಿಸೋಣ ಎಂದು ಕನಕಗುರು ಪೀಠಾಧ್ಯಕ್ಷ ನಿರಂಜನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.ಸಿಎಂ ಸಿದ್ದರಾಮಯ್ಯಗೆ ಪ್ರಧಾನಿ ಆಗುವ ಶಕ್ತಿಯಿದೆ. ಮುಂದೊಂದು ದಿನ ಅವರೇ ಏಕೆ ಪ್ರಧಾನಿ ಆಗಬಾರದು? ಅವರಿಗೆ ಆ ಸಾಮರ್ಥ್ಯವಿದೆ. ಅವರ ಒಳ್ಳೆ ಕೆಲಸದಿಂದ ಮುಂದೊಂದು ದಿನ ಅವರು ಆ ಹುದ್ದೆಗೇರಿದರೆ ನಾವೆಲ್ಲಾ ಬೆಂಬಲಿಸೋಣ