ಬೆಂಗಳೂರು: ಖಾಸಗಿ ವೈದ್ಯರ ಹಣೆಬರಹ ನಿರ್ಧರಿಸುವ ಖಾಸಗಿ ಆಸ್ಪತ್ರೆ ವಿಧೇಯಕ ತಿದ್ದುಪಡಿ ಮಾಡುವ ಕುರಿತಂತೆ ಇಂದು ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಸಭೆ ನಡೆಸಲಿದ್ದಾರೆ. ಕೆಪಿಎಂ ಖಾಯಿದೆ ವಿಧೇಯಕಕ್ಕೆ ಕೆಲವು ಮಾರ್ಪಾಡು ತರುವ ನಿಟ್ಟಿನಲ್ಲಿ ಸಿಎಂ ಇಂದು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಮಹತ್ವದ ಸಭೆ ನಡೆಸಿ ಚರ್ಚಿಸಲಿದ್ದಾರೆ.ತಿದ್ದುಪಡಿಯೊಂದಿಗೆ ಸದನದಲ್ಲಿ ವಿಧೇಯಕ ಮಂಡಿಸಲು ಸಿಎಂ ಸಮಾಲೋಚನೆ ನಡೆಸಲಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗಲಿದೆ. ಆದರೆ ಪ್ರತಿಪಕ್ಷ ಬಿಜೆಪಿ