ಮೈಸೂರು: ಮಂಡ್ಯ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಟ್ಟರೂ ಸ್ಪರ್ಧಿಸಲು ಷರತ್ತು ಹಾಕುತ್ತಿರುವ ರೆಬಲ್ ಸ್ಟಾರ್ ಅಂಬರೀಷ್ ವಿರುದ್ಧ ಸಿಎಂ ಸಿದ್ದರಾಮಯ್ಯಗೆ ಅಸಮಾಧಾನ ಉಂಟಾಗಿದೆ.ನಿನ್ನೆಯಷ್ಟೇ ಅಂಬರೀಷ್ ಜತೆ ಮಾತುಕತೆ ನಡೆಸಲ್ಲ. ಸ್ಪರ್ಧಿಸುವುದು ಅವರಿಗೆ ಬಿಟ್ಟ ವಿಚಾರ ಎಂದಿದ್ದ ಸಿಎಂ ಇಂದು ಅಂಬರೀಷ್ ಮನ ಒಲಿಸುವ ಕೆಲಸ ಮಾಡಲ್ಲ ಎಂದಿದ್ದಾರೆ.ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಅಂಬರೀಷ್ ಅಸಮಾಧಾನಗೊಂಡಿದ್ದರು. ಇದೇ ಕಾರಣಕ್ಕೆ ಇದೀಗ ಚುನಾವಣೆಗೆ ಸ್ಪರ್ಧಿಸಲು ಮಂಡ್ಯ ಉಸ್ತುವಾರಿ ಸ್ಥಾನ ಕೊಡಬೇಕು ಎಂದು ಬೇಡಿಕೆಯಿಟ್ಟಿದ್ದಾರೆ