ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ಜಯಂತಿ ಪ್ರಯುಕ್ತ ಟ್ವಿಟರ್ ನಲ್ಲಿ ಸಂದೇಶ ಬರೆದಿರುವ ಸಿಎಂ ಸಿದ್ದರಾಮಯ್ಯ ಸಂವಿಧಾನ ಇಲ್ಲದೇ ಇದ್ದಿದ್ದರೆ ಕುರಿ ಮೇಯಿಸ್ತಿದ್ದೆ ಎಂದಿದ್ದಾರೆ.ಬಾಬಾ ಸಾಹೇಬರು ರಚಿಸಿದ್ದ ಸಂವಿಧಾನ ಇಲ್ಲದೇ ಹೋಗಿದ್ದರೆ ನಾನು ಹಳ್ಳಿಯಲ್ಲಿ ದನ-ಕುರಿ ಮೇಯಿಸಿಕೊಂಡು ಉಳಿದು ಬಿಡುತ್ತಿದ್ದೆನೇನೋ? ನನ್ನಲ್ಲಿ ಸಾಮಾಜಿಕ ನ್ಯಾಯದ ಬದ್ಧತೆ, ಹೋರಾಟದ ಕಿಚ್ಚು ಮತ್ತು ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸಿದ್ದು ಅಂಬೇಡ್ಕರ್. ನನ್ನ ರಾಜಕೀಯ ಬದುಕು ಅಂಬೇಡ್ಕರ್ ಚಿಂತನೆಯ ಫಲ