ಬೆಂಗಳೂರು: ಮಠಗಳನ್ನು ಕಟ್ಕೊಂಡು ನಾನೇನು ಮಾಡ್ಲಿ? ಮಠಗಳನ್ನು ಸುಪರ್ದಿಗೆ ತೆಗೆದುಕೊಳ್ಳುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದು ಹೀಗೆ. ಈ ವಿಚಾರ ವಿವಾದವಾಗುತ್ತಿದ್ದಂತೆ ಸರ್ಕಾರ ಸುತ್ತೋಲೆ ಹಿಂಪಡೆದಿತ್ತು. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಸಿಎಂ ಸಿದ್ದರಾಮಯ್ಯ ಇದು ನಮ್ಮ ಸರ್ಕಾರದ ನಿರ್ಧಾರವಲ್ಲ ಎಂದಿದ್ದಾರೆ.ಈ ಪ್ರಸ್ತಾಪ ಎಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಬಂದಿತ್ತು. ಹೀಗಾಗಿ ಇದು ನಾವು ಮಾಡಿದ ವಿಚಾರವಲ್ಲ.