ಮಂಗಳೂರು: ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮಕ್ಕೆ ನಿನ್ನೆ ಉಡುಪಿಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಕೃಷ್ಣಮಠಕ್ಕೆ ಭೇಟಿ ಕೊಡದೇ ಇರುವುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಐದನೇ ಬಾರಿ ಉಡುಪಿಗೆ ಭೇಟಿ ನೀಡಿದ್ದರೂ ಒಮ್ಮೆಯೂ ಕೃಷ್ಣಮಠಕ್ಕೆ ಹೋಗದಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಸಿಎಂ ನನ್ನನ್ನು ಯಾರೂ ಕೃಷ್ಣಮಠಕ್ಕೆ ಕರೆದಿರಲಿಲ್ಲ. ಅದಕ್ಕೇ ಹೋಗಿರಲಿಲ್ಲ ಎಂದಿದ್ದಾರೆ.ನಾನು ಕೃಷ್ಣ ಮತ್ತು ಈಶ್ವರನ ಭಕ್ತ. ಕೃಷ್ಣ ಮಠಕ್ಕೆ ಹಿಂದೆ ಹೋಗಿದ್ದೆ. ಈಗ ಯಾರೂ ಕರೆದಿಲ್ಲ. ಅದಕ್ಕೇ ಹೋಗಲಿಲ್ಲ.