ಬೆಂಗಳೂರು: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಸಿದ್ದರಾಮಯ್ಯ ನಾನು ರಾಜ್ಯದ ಜನತೆಗೆ ಹಲವು ಭಾಗ್ಯಗಳನ್ನು ಕೊಟ್ಟೆ. ಆದರೆ ಯಡಿಯೂರಪ್ಪನವರು ಸೀರೆ, ಸೈಕಲ್ ಮಾತ್ರ ಕೊಟ್ಟರು ಎಂದು ಲೇವಡಿ ಮಾಡಿದ್ದಾರೆ.ರಾಜ್ಯದ ಜನತೆಗೆ ಇಷ್ಟೆಲ್ಲಾ ಭಾಗ್ಯಗಳನ್ನು ಕೊಟ್ಟ ಮೇಲೂ ನಮ್ಮದು 10 ಪರ್ಸೆಂಟ್ ಕಮಿಷನ್ ಸರ್ಕಾರ ಎನ್ನುತ್ತಾರೆ. ಜೈಲಿಗೆ ಹೋದವರನ್ನೆಲ್ಲಾ ಪಕ್ಕದಲ್ಲಿ ಕೂರಿಸಿಕೊಂಡು ಮೋದಿ ಈ ರೀತಿ ಹೇಳೋದು ಸರೀನಾ? ಎಂದು ಸಿಎಂ ಪ್ರಶ್ನಿಸಿದ್ದಾರೆ.ಬರೀ ಸೀರೆ ಸೈಕಲ್ ಕೊಟ್ಟಿದ್ದಕ್ಕೇ ಇಷ್ಟೆಲ್ಲಾ ಆಡ್ತಾರೆ.