ಬೆಂಗಳೂರು: ತಾವು ಅಧಿಕಾರಕ್ಕೆ ಬಂದರೆ ಸಿಎಂ ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.ಬಿಎಸ್ ಯಡಿಯೂರಪ್ಪನವರಿಗೆ 75 ವರ್ಷ ವಯಸ್ಸಾಗಿದೆ. ಇಷ್ಟು ವಯಸ್ಸಾದರೂ ಅವರಿಗೆ ಹೇಗೆ ಮಾತಾಡಬೇಕೆಂದು ಗೊತ್ತಿಲ್ಲ. ಸಂಸದೀಯ ಭಾಷೆ ಅವರಿಗೆ ಗೊತ್ತಿಲ್ಲ ಎಂದು ಸಿಎಂ ಟೀಕಿಸಿದ್ದಾರೆ.ಅವರ ಹಾಗೆ ನಾನು ಮಾತಾಡಲ್ಲ. ಯಡಿಯೂರಪ್ಪನವರು ಜೈಲಿಗೆ ಹೋಗಿದ್ದರ ಬಗ್ಗೆ ಮೊದಲು ತಿಳಿಸಲಿ. ನಂತರ ಬೇರೆಯವರನ್ನು ಜೈಲಿಗೆ ಕಳುಹಿಸುವುದರ ಬಗ್ಗೆ ಆಲೋಚನೆ ಮಾಡಲಿ