ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಯಡಿಯೂರಪ್ಪ ಅಥವಾ ಕುಮಾರಸ್ವಾಮಿ ಅವರಪ್ಪನಾಣೆಗು ಮುಖ್ಯಮಂತ್ರಿಗಳಾಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವ ಕನಸು ಬಿಡುವುದು ಒಳ್ಳೆಯದು ಎಂದು ಸಿಎಂ ಸಿದ್ದರಾಮಯ್ಯ ಯಲಬುರ್ಗಾದಲ್ಲಿ ಸುದ್ದಿಗಾರರ ಮುಂದೆ ಹೇಳಿದ್ದಾರೆ.ಬಿಜೆಪಿಯ ಮಿಷನ್ 150 ಈಗಾಗಲೇ ಠುಸ್ ಆಗಿದೆ. ಇನ್ನು, ಜೆಡಿಎಸ್ ಇರುವುದೇ ಮತ ವಿಭಜನೆ ಮಾಡಲು. ನಮ್ಮ ಅಭ್ಯರ್ಥಿಗಳನ್ನೇ ತಂದು