ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ ನಟಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾಗೆ ಸಿಎಂ ಸಿದ್ದರಾಮಯ್ಯ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ. ರಮ್ಯಾ ಟ್ವೀಟ್ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಟ್ವೀಟ್ ಬಗ್ಗೆ ನಾನು ಗಮನಿಸಿಲ್ಲ. ಆದರೆ ದೇಶದ ಪ್ರಧಾನಿ ಯಾವ ಪಕ್ಷದವರೇ ಆಗಿದ್ದರೂ ಅವಹೇಳನಕಾರಿಯಾಗಿ ಮಾತನಾಡಲಾರೆ ಎಂದು ಸಿಎಂ ಹೇಳಿದ್ದಾರೆ.ಟ್ವೀಟ್ ನಾನು ಗಮನಿಸಿಲ್ಲ. ನಾನೂ ಪ್ರಧಾನಿಯವರ ಹೇಳಿಕೆಗೆ ತಿರುಗೇಟು ನೀಡಿದ್ದೇನೆ. ಆದರೆ ಯಾವುದನ್ನೂ ವೈಯಕ್ತಿವಾಗಿ ಹೇಳಿಲ್ಲ.