ನಿಮಗೇನು ಬೇರೆ ಕೆಲಸ ಇಲ್ವಾ, ಯಾವಾಗ ನೋಡಿದರೂ ಯಡಿಯೂರಪ್ಪ ಮಂತ್ರ ಜಪಿಸ್ತೀರಾ ಎಂದು ಮಾಧ್ಯಮಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ಬಿಎಸ್ವೈ ಪ್ರಕರಣಗಳ ಬಗ್ಗೆ ಕಾನೂನು ಸಚಿವರನ್ನು ಕೇಳಿ. ಪ್ರತಿದಿನ ಯಡಿಯೂರಪ್ಪನವರ ಬಗ್ಗೆ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಎಸ್ವೈ ಪ್ರಕರಣಗಳಿಗೆ ಮರುಜೀವ ಕೊಡಲು ರಾಜ್ಯ ಸರಕಾರ ಯತ್ನಿಸಿದೆ ಎನ್ನುವ ಆರೋಪಗಳನ್ನು ತಳ್ಳಿಹಾಕಿದ ಅವರು, ಕಾನೂನು ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ. ಇದರಲ್ಲಿ