ಸಿದ್ದರಾಮಯ್ಯ ಕಾಮನ್ ಸೆನ್ಸ್ ಇಲ್ಲದ ಮುಖ್ಯಮಂತ್ರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಪ್ರತಿಯೊಂದಕ್ಕೂ ಕೇಂದ್ರ ಸರಕಾರದತ್ತ ಬೊಟ್ಟು ಮಾಡಿ ತೋರಿಸುವ ಪ್ರವೃತ್ತಿ ಹೊಂದಿದ್ದಾರೆ. ಸಿದ್ದರಾಮಯ್ಯ ಕಾಮನ್ ಸೆನ್ಸ್ ಇಲ್ಲದ ಮುಖ್ಯಮಂತ್ರಿ ಎಂದು ವಾಗ್ದಾಳಿ ನಡೆಸಿದರು. ಕೇಂದ್ರ ಸರಕಾರದಿಂದ ಬರ ಪರಿಹಾರದ ಹಣ ಬರುವುದು ಸ್ವಲ್ಪ ತಡವಾಗಿದೆ ನಿಜ. ಆದರೆ, ಬರ ಪರಿಹಾರದ ಹಣ ರಾಜ್ಯ ಸರಕಾರಕ್ಕೆ ತಲುಪಿದೆ. ಬರ