ರಸ್ತೆ ಬದಿ ಹೂ ಮಾರುತ್ತಿದ್ದ ಪುಟ್ಟ ಬಾಲಕಿಯನ್ನು ಕಂಡು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಕಾರನ್ನು ನಿಲ್ಲಿಸಿದರು. ಬಾಲಕಿಯ ಕಷ್ಟ ಸುಖ ವಿಚಾರಿಸಿ, ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದ ಘಟನೆ ನಡೆಯಿತು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೂಳ ಗ್ರಾಮದ ಬಳಿ ಈ ಪ್ರಸಂಗ ನಡೆದಿದೆ.ಕೆ.ಆರ್.ಎಸ್ನಿಂದ ರಾಮನಗರಕ್ಕೆ ಹೋಗುವ ಸಂದರ್ಭದಲ್ಲಿ ಬಾಲಕಿಯೊಬ್ಬಳು ಬೆಳಗೂಳ ಗ್ರಾಮದ ಬಳಿ ರಸ್ತೆ ಬದಿ ಹೂವನ್ನು ಮಾರುತ್ತಿದ್ದಳು. ಚಿಕ್ಕ ಬಾಲಕಿ ಶಾಲೆಗೆ ಹೋಗುವುದು ಬಿಟ್ಟು ಹೂವನ್ನು