ಚಿಕ್ಕಬಳ್ಳಾಪುರ ಜಿಲ್ಲೆಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿದ್ರಾ ಸಿಎಂ?

ಚಿಕ್ಕಬಳ್ಳಾಪುರ, ಮಂಗಳವಾರ, 10 ಸೆಪ್ಟಂಬರ್ 2019 (11:35 IST)

: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಕೆಗಳಿಗೆ ಅನುದಾನ ಕಡಿತ ಹಿನ್ನಲೆ ಸಿಎಂ ಬಿಎಸ್ ವೈ ವಿರುದ್ಧ ಜೆಡಿಎಸ್, ಕಾಂಗ್ರೆಸ್ ಶಾಸಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ 6 ತಾಲೂಕುಗಳ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಇದೀಗ 6 ತಾಲೂಕುಗಳ ಪೈಕಿ ಒಂದು ತಾಲೂಕಿಗೆ ಅನುದಾನ ನೀಡುವುದರ ಮೂಲಕ ಸಿಎಂ ಅನುದಾನ ಹಂಚಿಕೆಯಲ್ಲಿ ಮಾಡಿದ್ದಾರೆ ಎಂದು ಸಿಎಂ ಬಿಎಸ್ ವೈ ವಿರುದ್ಧ ಜೆಡಿಎಸ್, ಕಾಂಗ್ರೆಸ್ ಶಾಸಕರು ಕಿಡಿಕಾರಿದ್ದಾರೆ.


ರಾಜ್ಯ ಸರ್ಕಾರ, ಚಿಕ್ಕಬಳ್ಳಾಪುರ ತಾಲೂಕಿಗೆ 95 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಉಳಿದ ತಾಲೂಕುಗಳಿಗೆ ಬಿಡುಗಡೆಯಾಗಿದ್ದ 252 ಕೋಟಿ ರೂ ಅನುದಾನ ಸ್ಥಗಿತ ಮಾಡಲಾಗಿದೆ. ಬಾಗೇಪಲ್ಲಿ ಕ್ಷೇತ್ರಕ್ಕೆ ನೀಡಿದ್ದ 105 ಕೋಟಿಯಲ್ಲಿ 19 ಕೋಟಿ ರೂ. ಹಿಂಪಡೆಯಲಾಗಿದೆ. ಶಿಡ್ಲಘಟ್ಟ ಕ್ಷೇತ್ರಕ್ಕೆ ನೀಡಿದ್ದ 71ಕೋಟಿ ರೂ ಅನುದಾನ ಸ್ಥಗಿತ, ಚಿಂತಾಮಣಿ ಕ್ಷೇತ್ರಕ್ಕೆ ನೀಡಿದ್ದ 60 ಕೋಟಿ ಅನುದಾನ ಸ್ಥಗಿತ, ಗೌರಿ ಬಿದನೂರು  ಕ್ಷೇತ್ರಕ್ಕೆ ನೀಡಿದ್ದ 16 ಕೋಟಿ ಅನುದಾನ ಸ್ಥಗಿತ ಮಾಡಲಾಗಿದೆ. ಆದರೆ ಅನರ್ಹ ಶಾಸಕ ಕೆ,ಸುಧಾಕರ್ ಕ್ಷೇತ್ರಕ್ಕೆ ಮಾತ್ರ ಅನುದಾನ ಸ್ಥಗಿತಗೊಳಿಸಿಲ್ಲ ಎಂದು ಆರೋಪಿಸಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶ್ರೀರಂಗಪಟ್ಟಣದಲ್ಲಿ ಅಕ್ರಮ ಗಣಿಗಾರಿಕೆಗೆ ಬ್ರೇಕ್

ಮಂಡ್ಯ : ಶ್ರೀರಂಗಪಟ್ಟಣ ತಾಲೂಕಿನ ಸುತ್ತಮುತ್ತಲ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ ಒಂದು ತಿಂಗಳುಗಳ ಕಾಲ ...

news

ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ಲಾಬಿ

ಬೆಂಗಳೂರು : ಮೈತ್ರಿ ಸರ್ಕಾರ ಉರುಳಿದ ನಂತರ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ನಾಯಕರು ಇದೀಗ ಪ್ರತಿಪಕ್ಷ ...

news

ಗಂಡನ ಮೇಲಿನ ಸಿಟ್ಟಿಗೆ ಮಗುವನ್ನೇ ಹತ್ಯೆಗೈದ ತಾಯಿ

ಕೊಪ್ಪಳ : ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ತಾಯೊಯೊಬ್ಬಳು ತನ್ನ 16 ತಿಂಗಳ ಮಗುವನ್ನು ಹತ್ಯೆಮಾಡಿದ ...

news

ಪರಿಹಾರ ಕೇಂದ್ರದಲ್ಲಿ ಜ್ವರದಿಂದ ಬಾಲಕ ಸಾವು; 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ ಸಿಎಂ

ಬೆಳಗಾವಿ : ಬೆಳಗಾವಿಯ ಸುರೇಬಾನ್ ನ ಪರಿಹಾರ ಕೇಂದ್ರದಲ್ಲಿ ಬಾಲಕನೊಬ್ಬ 2 ದಿನದಿಂದ ಜ್ವರದಿಂದ ಬಳಲುತ್ತಿದ್ದ ...