ನಾಳೆ ಜುಲೈ 14-2022 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ನಾಗನಾಯಕನಹಳ್ಳಿಯ ಏರೋಟೆಕ್ ಪಾರ್ಕ್ ಗೆ ಬೇಟಿ ನೀಡಲಿದ್ದಾರೆ. KIADB ಮೊದಲ ಹಂತದ ಜಾಗದಲ್ಲಿ IFFCO ನ್ಯಾನೊ ಯೂರಿಯಾ ಸ್ಥಾವರಕ್ಕೆ ಅಡಿಗಲ್ಲು ಹಾಕಲಿದ್ದಾರೆ. Indian Farmer's Fertilizers Limited ನ ಈ ಸ್ಥಾವರದ ಮೂಲಕ ಯೂರಿಯಾ ಗೊಬ್ಬರ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗುವುದು. ಇದರ ಕಾಮಗಾರಿ ಚಾಲನೆಗೆ ಹಾಗು KIAFB ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ಸಹ ನಡೆಸಲಿದ್ದಾರೆ. CM.ಆಗಮನ ಹಿನ್ನಲೆ ಬೆಂಗಳೂರು ಗ್ರಾಮಾಂತರ S.P.ವಂಶೀಕೃಷ್ಣ ಖುದ್ದು ಭೇಟಿ ನೀಡಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದ್ದಾರೆ.