ಮುಖ್ಯಮಂತ್ರಿ ಕುಮಾರಸ್ವಾಮಿ ವಾಸ್ತವ್ಯ ಹೂಡಲಿರುವ ಗ್ರಾಮಕ್ಕೆ ಕೊನೆಗೂ ಕೊಳವೆ ಬಾವಿ ಭಾಗ್ಯ ಲಭಿಸಿದ್ದು, ಊರು ಸುಣ್ಣ ಬಣ್ಣ ಕಂಡು ಸಿಂಗಾರಗೊಳ್ಳುತ್ತಿದೆ.ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೂನ್ 26 ರಂದು ವಾಸ್ತವ್ಯ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಗ್ರಾಮದ ಭೇಟಿಗೆ ಮುಂದಾಗಿದ್ದು, ಅಭಿವೃದ್ಧಿ ಮಾಡುತ್ತಿದ್ದಾರೆ.ಕರೇಗುಡ್ಡದ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಸುಣ್ಣ, ಬಣ್ಣ ಕಂಡಿವೆ. ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ.ರಸ್ತೆ ದುರಸ್ತಿ, ವಿದ್ಯುತ್ ದೀಪ ಮೊದಲಾದ