ಬಿಬಿಎಂಪಿ ವ್ಯಾಪ್ತಿಯ 243 ವಾರ್ಡ್ಗಳ ಪೈಕಿ 108 ವಾರ್ಡ್ಗಳಲ್ಲಿ ಸ್ಥಾಪಿಸಲಾದ ‘ನಮ್ಮ ಕ್ಲಿನಿಕ್’ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಚಾಲನೆ ನೀಡಲಿದ್ದಾರೆ.ಇನ್ನು ಬಿಬಿಎಂಪಿಯ 243 ವಾರ್ಡ್ಗಳು ಸೇರಿದಂತೆ ರಾಜ್ಯದಲ್ಲಿ 438 ‘ನಮ್ಮ ಕ್ಲಿನಿಕ್’ ಆರಂಭಿಸುವುದಾಗಿ ರಾಜ್ಯ ಸರ್ಕಾರ ಕಳೆದ ಬಜೆಟ್ನಲ್ಲಿ ಘೋಷಿಸಿತ್ತು. ಅದರಂತೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ 114 ನಮ್ಮ ಕ್ಲಿನಿಕ್ಗಳಿಗೆ ಕಳೆದ ಡಿಸೆಂಬರ್ನಲ್ಲಿ ಚಾಲನೆ ನೀಡಲಾಗಿತ್ತು. ಇದೀಗ ಬಿಬಿಎಂಪಿ ವ್ಯಾಪ್ತಿಯ 108 ನಮ್ಮ ಕ್ಲಿನಿಕ್ಗಳಿಗೆ ಮಂಗಳವಾರ ಚಾಲನೆ ದೊರೆಯಲಿದೆ.