ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ನಿವಾಸದಲ್ಲಿ ವಿಶೇಷ ಹೋಮ ನಡೆದಿರೋದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ಬೈ ಎಲೆಕ್ಷನ್ ನಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲ್ಲೋ ಮೂಲಕ ದಿಗ್ವಿಜಯ ದಾಖಲು ಮಾಡಿತ್ತು. ಆ ಮೂಲಕ ಸರಕಾರ ಮುಂದಿನ ಮೂರುವರೆ ವರ್ಷ ಸುಭದ್ರ ಹಾಗೂ ಆಡಳಿತ ನಡೆಸೋದ್ರಲ್ಲಿ ಇಲ್ಲವೇ ಜೀವನದಲ್ಲಿ ಅಡ್ಡಿ, ತೊಂದರೆಗಳು ಬರಬಾರದು ಅಂತ ಹೋಮ, ಹವನ ನಡೆಸಿರೋದು ಚರ್ಚೆಗೆ ಕಾರಣವಾಗುತ್ತಿದೆ.ಸುದರ್ಶನ ನರಸಿಂಹ ಹೋಮವನ್ನು ಸಿಎಂ ನಿವಾಸದಲ್ಲಿ ನಡೆಸಲಾಗಿದೆ.ತಮ್ಮ ಕುಟುಂಬಕ್ಕೆ ಹಾಗೂ ರಾಜಕಾರಣದಲ್ಲಿ