ಬೆಂಗಳೂರು: ಕೊರೋನಾ ನಿಯಂತ್ರಣದ ತಲೆನೋವಿನ ನಡುವೆಯೇ ಸಿಎಂ ಯಡಿಯೂರಪ್ಪಗೆ ರಾಜ್ಯ ಬಿಜೆಪಿ ನಾಯಕರ ಅಸಮಾಧಾನ ನುಂಗಲಾರದ ತುತ್ತಾಗಿತ್ತು. ಆದರೆ ಇದೀಗ ಯಡಿಯೂರಪ್ಪನವರಿಗೆ ಹೈಕಮಾಂಡ್ ನ ಶ್ರೀರಕ್ಷೆ ದೊರೆತಿದೆ. ಕೊರೋನಾ ನಿಯಂತ್ರಣದ ನಡುವೆ ಅತೃಪ್ತರ ಬಂಡಾಯ ಶಮನ ಮಾಡುವುದು ಸವಾಲಾಗಿತ್ತು. ಆದರೆ ಇವರ ಬಗ್ಗೆ ನೀವು ತಲೆಕೆಡಿಸಿಕೊಳ್ಳದೇ ಕೊರೋನಾ ನಿಯಂತ್ರಣದ ಬಗ್ಗೆ ಮಾತ್ರ ಗಮನ ಕೊಡಿ. ಅತೃಪ್ತರನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೈಕಮಾಂಡ್ ಭರವಸೆ ನೀಡಿರುವುದು ಯಡಿಯೂರಪ್ಪನವರಿಗೆ ಆನೆ ಬಲ ಬಂದಂತಾಗಿದೆ.ಹೀಗಾಗಿ