ಮೈಸೂರು : ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ವಿಲನ್ ಎಂದು ಸಚಿವ ಎಸ್.ಟಿ.ಸೋಮಶೇಖರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರನ್ನು ಹೀರೊ ಅನ್ನುವ ಬದಲು ಬಾಯಿತಪ್ಪಿ ವಿಲನ್ ಎಂದು ಹೇಳಿದ್ದಾರೆ. ವಿಲನ್ ಎಂದ ತಕ್ಷಣ ಅಲರ್ಟ್ ಆದ ಶಾಸಕ ರಾಮದಾಸ್ ಅವರು ಅದು ವಿಲನ್ ಅಲ್ಲ ಹೀರೋ ಎಂದು ಸಲಹೆ ನೀಡಿದ್ದಾರೆ.ತಕ್ಷಣ ಎಚ್ಚೆತ್ತುಕೊಂಡ ಸಚಿವ ಸೋಮಶೇಖರ್ ಹೀರೋ, ವಿಲನ್ ಎಲ್ಲರನ್ನು ನಿಭಾಯಿಸಿದ್ದಾರೆ.