ಬೆಂಗಳೂರು: ದಾವೋಸ್ ಪ್ರವಾಸ ಮುಗಿಸಿ ತವರಿಗೆ ಬಂದಿಳಿದ ಸಿಎಂ ಯಡಿಯೂರಪ್ಪಗೆ ಮತ್ತೆ ಸಂಪುಟ ಸಂಕಟ ಶುರುವಾಗಿದೆ. ಸಿಎಂ ವಿದೇಶಕ್ಕೆ ತೆರಳಿದ ಮೇಲೆ ಕೆಲವು ದಿನ ತಣ್ಣಗಾಗಿದ್ದ ಸಂಪುಟ ವಿಸ್ತರಣೆ ಚರ್ಚೆ ಈಗ ಮತ್ತೆ ಶುರುವಾಗಿದೆ. ಅತೃಪ್ತರು ಮತ್ತು ಬಿಜೆಪಿ ಶಾಸಕರು ಸಚಿವ ಸ್ಥಾನಕ್ಕಾಗಿ ಸಿಎಂಗೆ ಒತ್ತಡ ಹೇರಲು ಆರಂಭಿಸಿದ್ದಾರೆ. ಈ ನಡುವೆ ಸೋತವರಿಗೂ ಸಚಿವ ಸ್ಥಾನ ನೀಡಬೇಕು ಎಂಬುದು ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದ ನಾಯಕರ ಬೇಡಿಕೆಯಾಗಿದೆ. ಆದರೆ ಉಪಚುನಾವಣೆಯಲ್ಲಿ