ಬೆಂಗಳೂರು: ನಾಯಕತ್ವ ಬದಲಾವಣೆ ವದಂತಿಗಳಿಂದ ಬೇಸತ್ತ ಸಿಎಂ ಯಡಿಯೂರಪ್ಪ ಹೈಕಮಾಂಡ್ ಬಯಸಿದರೆ ರಾಜೀನಾಮೆಗೆ ಸಿದ್ಧ ಎಂದು ಹೇಳಿರುವುದು ಅವರ ಆಪ್ತರಲ್ಲಿ ತಲ್ಲಣ ಮೂಡಿಸಿದೆ. ಒಂದು ವೇಳೆ ಹೈಕಮಾಂಡ್ ಯಡಿಯೂರಪ್ಪನವರೇ ನೀವು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಬೇಡ ಎಂದರೆ ತಕ್ಷಣವೇ ಅಧಿಕಾರದಿಂದ ಕೆಳಗಿಳಿಯಲು ಸಿದ್ಧ ಎಂದಿದ್ದರು.ಇದು ಅವರ ಆಪ್ತ ವಲಯದಲ್ಲಿ ತಲ್ಲಣ ಮೂಡಿಸಿತು. ತಕ್ಷಣವೇ ಅವರ ಆಪ್ತ ಸಚಿವರಾದ ಆರ್. ಅಶೋಕ್, ರೇಣುಕಾಚಾರ್ಯ ಮುಂತಾದವರು ಸಿಎಂ ಬಳಿ ತೆರಳಿ ಮಾತುಕತೆ ನಡೆಸಿದ್ದಾರೆ. ಇದರ