ಬೆಂಗಳೂರು: ಕೊರೋನಾ ಸಂಕಷ್ಟ ಕಾಲದ ಬಳಿಕ ರಾಜ್ಯ ಬಜೆಟ್ ಮಂಡನೆಗೆ ಸಿಎಂ ಯಡಿಯೂರಪ್ಪ ಸಿದ್ಧತೆ ನಡೆಸಿದ್ದಾರೆ. ಇಂದು ಸಮತೋಲಿತ ಬಜೆಟ್ ಮಂಡನೆಯ ಸಾಧ್ಯತೆ ಹೆಚ್ಚಿದೆ.ಕೊರೋನಾ, ಪ್ರವಾಹ, ಬರ ಇತ್ಯಾದಿಗಳಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಾಗ ಬಜೆಟ್ ಮಂಡಿಸುವುದು ಸಿಎಂಗೆ ಸವಾಲಿನ ಕೆಲಸವಾಗಲಿದೆ. ಈ ಬಜೆಟ್ ನಲ್ಲಿ ಆರೋಗ್ಯ, ಕೃಷಿ ಕ್ಷೇತ್ರ, ಪ್ರತೀ ತಾಲೂಕಿನಲ್ಲಿ ಗೋ ಶಾಲೆಗಳ ಸ್ಥಾಪನೆ, ಸಣ್ಣ ನೀರಾವರಿ ಯೋಜನೆಗಳಿಗೆ ಒತ್ತು ನೀಡುವುದು ಸೇರಿದಂತೆ ಸಂಕಷ್ಟಕ್ಕೀಡಾಗಿರುವ ಉದ್ಯಮಗಳನ್ನು ಮೇಲೆತ್ತಲು ಯೋಜನೆ