ಬೆಂಗಳೂರು : ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕಲ್ಲಿದ್ದಲ್ಲು ಕಡಿಮೆಯಾಗಬಾರದೆಂಬ ದೃಷ್ಟಿಯಿಂದ ಕೇಂದ್ರ ಗಣಿ ಸಚಿವರನ್ನು ಭೇಟಿ ಮಾಡಿ, ನಮ್ಮ ಬೇಡಿಕೆಗಳನೆಲ್ಲಾ ಅವರ ಬಳಿ ಹೇಳಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಒಟ್ಟು ನಮಗೆ 10 ರ್ಯಾಟ್ ಕಲ್ಲಿದ್ದಲು ಬರ್ತಿದೆ. ಅದನ್ನು 14 ರ್ಯಾಟ್ ಗೆ ಏರಿಕೆ ಮಾಡಿದ್ರೆ ನಮಗೆ ಸರಿ ಹೋಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಎರಡ್ಮೂರು ಮೈನಿಂಗ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಚನೆ ಕೊಟ್ಟಿದ್ದಾರೆ