ಮಂಗಳೂರು: ಕೇರಳದಿಂದ ಮಂಗಳೂರು ಭಾಗದವರೆಗೆ ನಿಪಾಹ್ ವೈರಸ್ ಜ್ವರವೆಂಬ ಮಾರಣಾಂತಿಕ ಖಾಯಿಲೆಯ ಬಗ್ಗೆ ಜನ ಭಯಭೀತರಾಗಿದ್ದಾರೆ. ಅದರ ಬೆನ್ನಲ್ಲೇ ಮತ್ತೊಂದು ಪ್ರಾಕೃತಿಕ ವಿಕೋಪದ ಮುನ್ಸೂಚನೆ ಸಿಕ್ಕಿದೆ. ಅರಬ್ಬಿ ಸಮುದ್ರದಲ್ಲಿ ಮೆಕುನು ಚಂಡಮಾರುತ ಏಳಲಿದ್ದು, ಇದರಿಂದಾಗಿ ಮೂರು ದಿನಗಳ ಕಾಲ ಸಮುದ್ರ ಕರಾವಳಿ ಪ್ರದೇಶದ ಜನರಿಗೆ ಎಚ್ಚರವಾಗಿರುವಂತೆ ಹವಾಮಾನ ಇಲಾಖೆ ಸೂಚಿಸಿದೆ.ಮೇ 26 ರವರೆಗೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡದಾದ್ಯಂತ ಮುಂದಿನ ಮೂರು