ಕಾರವಾರ : ಮತ್ಸ್ಯ ಸಂಪದ ಯೋಜನೆಗೆ ಕೇಂದ್ರ ಬಜೆಟ್ನಲ್ಲಿ ಸಾವಿರಾರು ಕೋಟಿ ಅನುದಾನ ಘೋಷಿಸಿದೆ. ಇದೇ ಯೋಜನೆಯ ಅನುದಾನ ಬಳಸಿ ರಾಜ್ಯ ಸರ್ಕಾರ ಆಳಸಮುದ್ರ ದೋಣಿ ಖರೀದಿಗೆ ರೂಪಿಸಿದ್ದ ಯೋಜನೆ ಜಿಲ್ಲೆಯಲ್ಲಿ ಸಮರ್ಪಕ ಅನುಷ್ಠಾನಕ್ಕೆ ಬಂದಿಲ್ಲ.ಸರ್ಕಾರ ಸೂಚಿಸಿದ ದೋಣಿಗಳ ಖರೀದಿಗೆ ಇಲ್ಲಿನ ಮೀನುಗಾರರು ಒಪ್ಪದಿರುವುದು ಯೋಜನೆಯ ಹಿನ್ನೆಲೆಗೆ ಕಾರಣವಾಗಿದೆ. ಮೀನುಗಾರರ ಬೇಡಿಕೆಗೆ ತಕ್ಕ ದೋಣಿ ಖರೀದಿಗೆ ಸಹಾಯಧನ ಒದಗಿಸಲು ಸರ್ಕಾರ ಒಪ್ಪದ ಕಾರಣ ಯೋಜನೆ ಘೋಷಣೆಗೆ ಸೀಮಿತವಾಗಿಯೇ ಉಳಿದುಕೊಂಡಿದೆ.ಕೇಂದ್ರ ಸರ್ಕಾರದ