ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೇಲೆ ವಿದ್ಯುತ್ ತಂತಿ ಪ್ರವಹಿಸಿ ಗಂಭೀರ ಗಾಯಗೊಂಡಿರುವ ಘಟನೆ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.ನಗರದ ಕ್ರೈಸ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಪ್ರಿಯಾಳನ್ನ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಖ ಸೇರಿ ದೇಹದ ಇನ್ನಿತರ ಭಾಗಗಳಲ್ಲಿ ವಿದ್ಯುತ್ ಹರಿದ ಹಿನ್ನೆಲೆ ಶೇ.40ರಷ್ಟು ಸುಟ್ಟ ಗಾಯವಾಗಿದೆ. ಇಂದು ಮಧ್ನಾಹ್ಯ ರಸ್ತೆಯೊಂದರಲ್ಲಿ ಬರುತ್ತಿದ್ದ ಕ್ಯಾಂಟರ್ ವಾಹನದ ಚಕ್ರಕ್ಕೆ ಕೆಳಗೆ ಬಿದ್ದಿದ್ದ ವೈರ್