ಬೆಂಗಳೂರು : ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಹಠ ಬಿಡಿ ಕೆಲಸಕ್ಕೆ ಬನ್ನಿ ಎಂದು ಸಾರಿಗೆ ನೌಕರರಿಗೆ ಸಿಎಂ ಬಿಎಸ್ ವೈ ಮನವಿ ಮಾಡಿದ್ದಾರೆ. ಸಾರಿಗೆ ನೌಕರರ 8 ಬೇಡಿಕೆಗಳನ್ನು ಈಡೇರಿಸಿದ ಮೇಲೆ ಮತ್ಯಾಕೆ ಮಾತುಕತೆ? ಸಾರಿಗೆ ನೌಕರರ ಜತೆ ಮತ್ತೆ ಮಾತುಕತೆ ಇಲ್ಲ ಎಂದು ಮಾತುಕತೆಯ ಸಾಧ್ಯತೆಯನ್ನು ಸಿಎಂಬಿಎಸ್ ಯಡಿಯೂರಪ್ಪ ತಳ್ಳಿಹಾಕಿದ್ದಾರೆ.ನಾನು ಹಠ ಮಾಡುತ್ತಿಲ್ಲ. ಹಠ ಮಾಡದೇ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಬನ್ನಿ, ಜನರು ಸಂಕಷ್ಟದಲ್ಲಿ ಸಿಲುಕಿ ನರಳುತ್ತಿದ್ದಾರೆ.