ಬಸನಗೌಡ ಪಾಟೀಲ್ ಮಾಡ್ತಿರೋದು ಕಾಮಿಡಿ, ಅವರು ಸುಳ್ಳು ಭವಿಷ್ಯಗಾರ

ಬೆಂಗಳೂರು, ಮಂಗಳವಾರ, 7 ಮೇ 2019 (19:43 IST)

ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಜೆಡಿಎಸ್ ಮುಖಂಡ ಕಿಡಿಕಾರಿದ್ದಾರೆ.

ಬಸನಗೌಡ ಪಾಟೀಲ್ ಸುಳ್ಳು ಹೇಳುವುದನ್ನು ಮೊದಲು ಬಿಡಬೇಕು ಅಂತ ಮೇಲ್ಮನೆ ಜೆಡಿಎಸ್ ಸದಸ್ಯ ಟಿ.ಎ.ಶರವಣ ಕಿಡಿಕಾರಿದ್ದಾರೆ.  ಪಾಟೀಲ್ ರಾಜಕೀಯ ಮಾಡುವುದನ್ನು ಬಿಟ್ಟು ಜ್ಯೋತಿಷ್ಯವನ್ನು ಎಂದಿನಿಂದ ಹೇಳುವುದನ್ನು ಶುರುಮಾಡಿದ್ದಾರೆ? ಬಸನಗೌಡ ಅವರಿಗೆ ತಮಾಷೆ ಮಾಡುವ ಅಭ್ಯಾಸವಿದೆ.

ಅದನ್ನು ಅವರು ಆಗಾಗ ರಾಜಕೀಯದಲ್ಲಿಯೂ ಬಳಸುತ್ತಿರುತ್ತಾರೆ ಎಂದು ಟೀಕೆ ಮಾಡಿದ್ರು. ಮೈತ್ರಿ ಸರ್ಕಾರ ಪತನಗೊಳ್ಳುತ್ತದೆ ಎಂದು ಸುಳ್ಳು ಭವಿಷ್ಯ, ‌ಜ್ಯೋತಿಷ್ಯ ಹೇಳಿದ ಬಿಜೆಪಿ ನಾಯಕರ ಹೇಳಿಕೆ ಠುಸ್ ಆಗಿದೆ. ಅದೇ ರೀತಿ ಬಸನಗೌಡ ಪಾಟೀಲರ ಭವಿಷ್ಯವೂ ಸುಳ್ಳಾಗಲಿದೆ.

ನಮ್ಮ ನಾಯಕರಾಗಿರುವ  ಹೆಚ್‌‌.ಡಿ.ಕುಮಾರಸ್ವಾಮಿ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವುದು ಖಚಿತ ಎಂದರು.

ವಿಜಯಪುರದಲ್ಲಿ ಬಸನಗೌಡ ಪಾಟೀಲ್, ಅವರು ಮೇ 23 ರ ಬಳಿಕ ಮೈತ್ರಿ ಸರ್ಕಾರವನ್ನು ಪತನಗೊಳಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

'ಮೋದಿ ಸಾಬ್ ಭಾಷಣ್‌‌ ಸೇ ರೇಷನ್ ನಹಿ ಮಿಲ್ತಿ'

ಪ್ರಧಾನಿ ವಿರುದ್ಧ ಕಾಂಗ್ರೆಸ್ ಕೋಟೆಯಲ್ಲಿ ಮತ್ತೆ ಖರ್ಗೆ ಟೀಕೆಗಳ ಮಳೆ ಸುರಿಸಿದ್ದಾರೆ.

news

ಅಪ್ಪಾಜಿ ಮೊಬೈಲ್ ಕ್ಯಾಂಟೀನ್ ಉದ್ಘಾಟನೆ ಎಂದು?

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರಿಗೆ 85 ನೇ ವರ್ಷದ ಜನುಮದಿನದ ಅಂಗವಾಗಿ ಅಪ್ಪಾಜಿ ...

news

ನಾಲಿಗೆ ಮತ್ತೆ ಹರಿಬಿಟ್ಟ ಬಿಜೆಪಿ ಶಾಸಕ; ವಿವಾದಾತ್ಮಕ ಹೇಳಿಕೆ

ಎಲ್ಲರೂ ಒಂದೇ ಮದುವೆ ಆಗಿ, ಎರಡೇ ಮಕ್ಕಳನ್ನು ಮಾಡಬೇಕು ಎಂದು ಮತ್ತೆ ಬಿಜೆಪಿ ಶಾಸಕ ವಿವಾದಾತ್ಮಕ ಹೇಳಿಕೆ ...

news

ಮಂಡ್ಯ ಮಕ್ಕಳ ಮೇಲೆ ಎಲೆಕ್ಷನ್ ಪ್ರಭಾವ ಹೇಗಿದೆ ನೋಡಿ; ವೈರಲ್

ಚಿಕ್ಕ ಮಕ್ಕಳ ಮೇಲೆ ಪ್ರಭಾವ ಬೀರುತ್ತಿದೆ ಮಂಡ್ಯ ಲೋಕಸಭಾ ಚುನಾವಣೆ.