ಕೊರೊನಾ ರ್ಯಾಪಿಡ್ ಟೆಸ್ಟ್ ಮಶೀನ್ ಈ ಜಿಲ್ಲೆಗೂ ಬಂತು

ಬಳ್ಳಾರಿ| Jagadeesh| Last Modified ಗುರುವಾರ, 9 ಏಪ್ರಿಲ್ 2020 (19:29 IST)
ಮಾರಕ ಕೊರೊನಾ ವೈರಸ್ ಪರೀಕ್ಷೆ ಮಾಡುವ ರ್ಯಾಪಿಡ್ ಟೆಸ್ಟ್ ಮಶೀನ್ ಗಳು ರಾಜ್ಯದ ಈ ಜಿಲ್ಲೆಗೂ ಬರಲಿದೆ.
ಕೊರೊನಾ ಸೋಂಕು ಪರೀಕ್ಷೆಯ ರ್ಯಾಪಿಡ್ ಟೆಸ್ಟ್ ಮಶೀನ್‍ಗಳು ಏಪ್ರಿಲ್  12ರಂದು ಬಳ್ಳಾರಿ ಜಿಲ್ಲೆಗೆ ಬರಲಿವೆ. ಅವುಗಳಿಂದ ಪರೀಕ್ಷಿಸುವುದಕ್ಕೆ ಸಂಬಂಧಿಸಿದಂತೆ ಕ್ವಾರಂಟೈನ್‍ನ ವೈದ್ಯರು ಹಾಗೂ ಫೀವರ್‍ ಕ್ಲಿನಿಕ್‍ನಲ್ಲಿರುವ ವೈದ್ಯರಿಗೆ ತರಬೇತಿ ನೀಡಲಾತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.> > ಈ ಮಿಷನ್‍ಗಳನ್ನು ಜಿಲ್ಲಾ ವಿಪತ್ತು ಪರಿಹಾರ ನಿಧಿ ಮೂಲಕ ಖರೀದಿಸಲಾಗಿದೆ. ಕ್ವಾರಂಟೈನ್‍ನಲ್ಲಿರುವ 55 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಯಾರಿಗಾದರೂ ಗಂಭೀರ ರೀತಿಯ ರೋಗಗಳಿಂದ ಬಳಲುತ್ತಿದ್ದರೇ ಅಂತವರ ಮಾಹಿತಿ ಪಡೆದು ಅಂತವರಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತದೆ ಎಂದಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :