ತಪ್ಪು ಮಾಡುವ ಮುನ್ನ ಎಚ್ಚರವಾಗಿರಿ ... ಕಮಲ್ ಪಂಥ್ ಎಚ್ಚರಿಕೆ

ಬೆಂಗಳೂರು| geetha| Last Modified ಭಾನುವಾರ, 21 ನವೆಂಬರ್ 2021 (14:36 IST)
ತಪ್ಪು ಅಥವಾ ವಂಚನೆ ಯಾರೇ ಮಾಡಿದರೂ ಅವರ ವಿರುದ್ಧ ನಿರ್ದಾಕ್ಷಣ್ಯ ಕ್ರಮಕೈಗೊಳ್ಳುತ್ತೇವೆ. ಅದರಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದರು. ಶನಿವಾರ ಟ್ವಿಟರ್‌ನಲ್ಲಿ ಸಾರ್ವಜನಿಕರ ಜತೆ ಸಂವಾದ ನಡೆಸಿದ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು ಟ್ವೀಟಿಗರ ಪ್ರಶ್ನೆಗಳಿಗೆ ಉತ್ತರಿಸಿದರು.ಶಾಹಿದ್‌ ಎಂಬವರು ತಮಗೆ ಕೆಲ ರಾಜಕೀಯ ಮುಖಂ ಡರು, ಬಿಲ್ಡರ್‌ಗಳು ಸೇರಿ 21 ಲಕ್ಷ ರೂ. ವಂಚಿಸಿದ್ದಾರೆ. ಈ ಸಂಬಂಧ ಠಾಣೆಗೆ ದೂರು ನೀಡಿದ್ದೇನೆ. ಆದರೆ, ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಈ ರೀತಿಯ ತಾರತಮ್ಮ ಏಕೆ ಎಂದು ಪ್ರಶ್ನಿಸಿ ದ್ದಾರೆ.
 
ಅದಕ್ಕೆ ಉತ್ತರಿಸಿರುವ ಆಯುಕ್ತರು, ಈ ಬಗ್ಗೆ ಸಂಬಂಧಿ ಸಿದ ಡಿಸಿಪಿಗೆ ದೂರು ನೀಡಿ, ಒಂದು ವೇಳೆ ಅವರು ಸಮಸ್ಯೆ ಬಗೆಹರಿಸದಿದ್ದರೆ, ಹೆಚ್ಚುವರಿ ಪೊಲೀಸ್‌ ಆಯುಕ್ತರು ಅಥವಾ ತಮಗೆ ನೇರವಾಗಿ ಬಂದು ದೂರು ನೀಡಿ ಎಂದರು.


ಇದರಲ್ಲಿ ಇನ್ನಷ್ಟು ಓದಿ :