ಗ್ರಾಮ ಪಂಚಾಯಿತಿ ಮತ್ತು ಜನ ಪ್ರತಿನಿಧಿಗಳಿಂದ ಮಹಾ ಮೋಸವಾಗಿದೆಂದು ಹಾವೇರಿ ಜಿಲ್ಲೆಯ ಕಬ್ಬುರಿನ ಸಿದ್ದೇಶ್ವರ ತಾಂಡಾದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಹಾವೇರಿ ಜಿಲ್ಲೆಯ ಕಬ್ಬೂರಿನ ಸಿದ್ದೇಶ್ವರ ತಾಂಡಾದಲ್ಲಿ ದೇವಸ್ಥಾನದ ಸರ್ವೆ ನಂಬರ್ ತೋರಿಸಿ ಸರ್ಕಾರಿ ಗೋಮಾಳದ ಜಾಗದಲ್ಲಿ ಗ್ರಾಮ ಪಂಚಾಯತಿ ಮತ್ತು ಜನ ಪ್ರತಿನಿಧಿಗಳು ಅಕ್ರಮವಾಗಿ ಸಮುದಾಯ ಭವನವನ್ನು ನಿರ್ಮಾಣ ಮಾಡಿ, ಜನರಿಗೆ ಮೋಸವನ್ನು ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ರು.ಗ್ರಾಮ ಪಂಚಾಯಿತಿಯವರು ಲಕ್ಷಾಂತರ ರೂಪಾಯಿ ಅನುದಾನ ಪಡೆದು ನಿರ್ಮಾಣ ಮಾಡಿದ್ದು, ಸರ್ವೆ