ಬಾಗಲಕೋಟೆ : ಜಮಖಂಡಿ ಉಪಚುನಾವಣೆ ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಕಾಂಗ್ರೆಸ್ ನಾಯಕ ಡಿಸಿಎಂ ಡಾ.ಜಿ. ಪರಮೇಶ್ವರ್ ಹಾಗೂ ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ವಿರುದ್ದ ಚುನಾವಣಾಧಿಕಾರಿ ದೂರು ದಾಖಲಿಸಿಕೊಂಡಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಆಶ್ವಾಸನೆ, ಸರ್ಕಾರಿ ಯೋಜನೆ ಘೋಷಣೆ, ಉದ್ಘಾಟನೆ ಮಾಡುವಂತಿಲ್ಲ.ಆದರೆ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರು, ಅ.23 ರಂದು ತಮ್ಮ ಪಕ್ಷದ ಅಧ್ಯರ್ಥಿ ಆನಂದ್ ನ್ಯಾಮಗೌಡ ಪರ ಜಮಖಂಡಿಯ ಸಾವಳಗಿಯಲ್ಲಿ ಪ್ರಚಾರ ಮಾಡುವಾಗ,