ಮಂಡ್ಯ : ಎರಡು ದಿನಗಳ ಹಿಂದೆಯಷ್ಟೇ ಪ್ರಜಾಧ್ವನಿ ಯಾತ್ರೆ ವೇಳೆ 500 ರೂ. ನೋಟುಗಳನ್ನು ಎರಚಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಜಾಧ್ವನಿ ಯಾತ್ರೆಯ ಭಾಗವಾಗಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ರೋಡ್ಶೋ ನಡೆಸಲಾಗಿತ್ತು. ರೋಡ್ ಶೋನಲ್ಲಿ ಜನಪದ ಕಲಾತಂಡಗಳು ಭಾಗವಹಿಸಿದ್ದವು. ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಪದ ಕಲಾವಿದರಿಗೆ ಬೇವಿನಹಳ್ಳಿ ಗ್ರಾಮದಲ್ಲಿ ಹಣ ಕೊಡುವಾಗ ಡಿ.ಕೆ ಶಿವಕುಮಾರ್ ಬಸ್ಸಿನ ಮೇಲಿಂದಲೇ 500 ರೂ.