ಬೆಂಗಳೂರು: ಜಾಹೀರಾತು ಫಲಕಗಳ ವೆಚ್ಚ ಬಿಬಿಎಂಪಿಗೆ ಪಾವತಿ ಮಾಡದ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ನಗರ ಆಯುಕ್ತ ಎನ್.ಆರ್. ರಮೇಶ್ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ತಮ್ಮ ಪಕ್ಷದ ಹಾಗೂ ಸರ್ಕಾರದ ಯೋಜನೆಗಳಿಗಾಗಿ ನಗರಾದ್ಯಂತ ಜಾಹೀರಾತು ಫಲಕ ಹಾಕಿದ ಬಾಬ್ತು ಬೆಂಗಳೂರು ಮಹಾನಗರ ಪಾಲಿಕೆಗೆ 68.15 ಕೋಟಿ ರೂ. ಪಾವತಿ ಮಾಡಬೇಕಿದೆ.ಆದರೆ ಇನ್ನೂ ಹಣ ಪಾವತಿ ಬಾಕಿ ಉಳಿಸಿಕೊಂಡಿದ್ದಾರೆಂದು ಸಿಎಂ ವಿರುದ್ಧ ಲೋಕಾಯುಕ್ತರಿಗೆ ರಮೇಶ್ ದೂರು