ಪಕ್ಕದ ಮನೆಯವರ ಕೋಳಿ ಕೂಗುವುದರಿಂದ ರಾತ್ರಿಹೊತ್ತು ನಾವು ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ತುಂಬಾ ತೊಂದರೆಯಾಗುತ್ತಿದೆ ಎಂದು ಬೆಂಗಳೂರು ಪೊಲೀಸರಿಗೆ ವ್ಯಕ್ತಿಯೊಬ್ಬ ದೂರು ನೀಡಿದ್ದಾನೆ. ನೆರೆಮನೆಯವರನ್ನು ದೂರಿ ನೆಮೊ ಹೆಸರಿನ ವ್ಯಕ್ತಿ ಟ್ವಿಟ್ಟರ್ ಖಾತೆ ಪೋಸ್ಟ್ ಹಾಕಿದ್ದಾನೆ. ಪೋಸ್ಟ್ನಲ್ಲಿ ಮನೆಯ ವಿಡಿಯೋ ಜೊತೆಗೆ ತಮಗಾಗುತ್ತಿರುವ ಸಮಸ್ಯೆ ಕುರಿತು ಹೇಳಿಕೊಂಡಿದ್ದಾನೆ. ಜೆಪಿ ನಗರ 8ನೇ ಹಂತದಲ್ಲಿನ ಮನೆಯೊಂದರಲ್ಲಿ ಕೋಳಿ ಮತ್ತು ಬಾತುಕೋಳಿ ಸಾಕಾಣೆ ಮಾಡ್ತಾರೆ. ಬೆಳಗ್ಗೆ ಮೂರು ಗಂಟೆಗೆ ಕೋಳಿಗಳು ಒಟ್ಟಾಗಿ