ಅಪರೇಷನ್ ಕಮಲದ ಆಡಿಯೋದ ಸಂಪೂರ್ಣ ಮಾಹಿತಿ ಬಹಿರಂಗ; ಶರಣಗೌಡ ಮುಂದೆ ಆಪರೇಷನ್ ಪ್ಲಾನ್ ಬಿಚ್ಚಿಟ್ಟಿ ಶಾಸಕ ಶಿವನಗೌಡ ನಾಯಕ್

ಬೆಂಗಳೂರು, ಬುಧವಾರ, 13 ಫೆಬ್ರವರಿ 2019 (11:20 IST)

ಬೆಂಗಳೂರು : ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಅಪರೇಷನ್ ಕಮಲದ  ಆಡಿಯೋದ ಸಂಪೂರ್ಣ  ಮಾಹಿತಿ ಇದೀಗ ಬಹಿರಂಗವಾಗಿದೆ.


ಬಿಎಸ್ ವೈ ಜೊತೆ ಮಾತನಾಡುವ ಮುನ್ನ ಶರಣಗೌಡನ ಜೊತೆ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಡೀಲ್ ಬಗ್ಗೆ ಚರ್ಚೆ ಮಾಡಿದ್ದಾರೆ.  ಅತೃಪ್ತ ಶಾಸಕರನ್ನು ಒಗ್ಗೂಡಿಸುವುದು ಹೇಗೆ? ಶಾಸಕರ ರಾಜೀನಾಮೆ ಕೊಡಿಸೋದು ಹೇಗೆ? ಎಂದು ಶಿವನಗೌಡ ನಾಯಕ್  ಮುಂದೆ ಆಪರೇಷನ್ ಪ್ಲಾನ್ ಬಿಚ್ಚಿಟ್ಟಿದ್ದಾರೆ. ‘ಸದ್ಯ 10 ಆಗಿದೆ, ನಾಳೆ ಮತ್ತೆ ಮೂವರು ಬಂದು ಸೇರ್ತಾರೆ. 15 ಆದ ಕೂಡಲೇ ರಾಜೀನಾಮೆ ಕೊಡಿಸೋ ಕೆಲಸ’ ಎಂದು ಅತೃಪ್ತರ ಸಂಖ್ಯೆ ಬಗ್ಗೆ ಶರಣಗೌಡಗೆ ಶಿವನಗೌಡ ನಾಯಕ್ ವಿವರಣೆ ನೀಡಿದ್ದಾರೆ.


ಹಾಗೇ ರಮೇಶ್ ಕುಮಾರ್ ಕಾಂಗ್ರೆಸ್ ಫೇವರ್ ಅಲ್ವಾ ಎಂದ ಶರಣಗೌಡ ಪ್ರಶ್ನಿಸಿದ್ದಕ್ಕೆ, ಇದನ್ನ ಅಮಿತ್‍ ಶಾ, ಪ್ರಧಾನಿ ಮೋದಿ ನೋಡಿಕೊಳ್ತಾರೆ. ದೊಡ್ಡ ಲೆವೆಲ್ ನಲ್ಲಿ ಗವರ್ನರ್ ದು ಎಲ್ಲಾ ಆಗಿದೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಜಡ್ಜಸ್ ಗೆ ಎಲ್ಲವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.  ಏನೇನು ಮಾಡಬೇಕು ಅನ್ನೋ ಮಟ್ಟಿಗೆ ಎಲ್ಲಾ ರೆಡಿಯಾಗಿದೆ ಎಂದು ಶಿವನಗೌಡ ನಾಯಕ್  ಶರಣಗೌಡ ಮುಂದೆ ಆಪರೇಷನ್ ಪ್ಲಾನ್ ಬಿಚ್ಚಿಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಪರೇಷನ್ ಕಮಲ ಫೇಲ್; ಕೊನೆಗೂ ಬೆಂಗಳೂರಿಗೆ ಬಂದ ಅತೃಪ್ತರು

ಬೆಂಗಳೂರು : ಮುಂಬೈ ನಲ್ಲಿದ್ದ ನಾಲ್ವರು ಅತೃಪ್ತ ಶಾಸಕರು ಕೊನೆಗೂ ಬೆಂಗಳೂರಿಗೆ ಆಗಮಿಸಿದ್ದಾರೆ ಎಂಬುದಾಗಿ ...

news

ಲಿಪ್ಟ್ ನಲ್ಲಿ ಒಂಟಿಯಾಗಿದ್ದ ಮಹಿಳೆ ಹತ್ತಿರ ಹೋದ ಯುವಕ ಮಾಡಿದ್ದೇನು ಗೊತ್ತಾ?

ದುಬೈ : ದುಬೈ ನಲ್ಲಿ ಲಿಪ್ಟ್ ವೊಂದರಲ್ಲಿ ಒಂಟಿಯಾಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಭಾರತೀಯ ಮೂಲದ ...

news

ಪ್ರಧಾನಿ ಮೋದಿ ಎದುರುಗಡೆಯೇ ಸಚಿವೆ ಸೊಂಟಕ್ಕೆ ಕೈಹಾಕಿದ ಬಿಜೆಪಿ ಸಚಿವ

ನವದೆಹಲಿ : ಪ್ರಧಾನಿ ಮೋದಿ ಎದುರುಗಡೆಯೇ ಬಿಜೆಪಿ ಸಚಿವನೊಬ್ಬ ಸಹೋದ್ಯೋಗಿ ಜೊತೆ ಅಸಭ್ಯವಾಗಿ ನಡೆದುಕೊಂಡ ...

news

6 ವರ್ಷದ ಹೆಣ್ಣು ಮಗುವನ್ನು ಕೊಂದು ರಕ್ತ ಕುಡಿದ ರಾಕ್ಷಸ ಮಹಿಳೆ

ವಿಶಾಖಪಟ್ಟಣಂ: ಮಹಿಳೆಯೊಬ್ಬಳು ತನ್ನ ಮಾತಿಗೆ ವಿರೋಧ ವ್ಯಕ್ತಪಡಿಸಿದ ಆರು ವರ್ಷದ ಹೆಣ್ಣು ಮಗುವನ್ನು ಕೊಲೆ ...