ಕೆಎಸ್ಆರ್ಟಿಸಿ ನಿರ್ವಾಹಕನೊಬ್ಬ ಬಸ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರ್ಗಿಯ ಚಿಂಚೊಳ್ಳಿ ಬಸ್ ಘಟಕದಲ್ಲಿ ಮಂಗಳವಾರ ನಡೆದಿದೆ. ಈರಣ್ಣ ಆತ್ಮಹತ್ಯೆಗೆ ಶರಣಾದ ಬಸ್ ಕಂಡಕ್ಟರ್. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ಡಿಪೋದಲ್ಲಿ ನಿಲ್ಲಿಸಲಾಗಿದ್ದ ಬಸ್ ನಲ್ಲಿ ಈರಣ್ಣ (35) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ. ಮೃತನನ್ನು ಈರಣ್ಣ ಎಂದು ಗುರುತಿಸಲಾಗಿದ್ದು ಈತ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮೀನಕೆರಾ ಗ್ರಾಮದ ನಿವಾಸಿಯಾಗಿದ್ದಾನೆ.ಈಶಾನ್ಯ ಕರ್ನಾಟಕ ಸಾರಿಗೆ