ವಿಜಯನಗರ : ಜಮೀನು ಕೆಲಸಕ್ಕಾಗಿ ಹೊಲಕ್ಕೆ ತೆರಳಿದ್ದಂತ ರೈತನೊಬ್ಬ, ಸಂಜೆ ಮನೆಗೆ ವಾಪಾಸ್ ಆಗುತ್ತಿದ್ದಂತಹ ಸಂದರ್ಭದಲ್ಲಿ ಮಳೆಯ ಜೊತೆಗೆ ಸಿಡಿಲು ಬಂದೆರಗಿದ್ರೂ… ಕೂದಲೆಳೆಯ ಅಂತರದಲ್ಲಿ ಪಾರಾಗಿ ಬದುಕಿ ಬಂದಿದ್ದಾರೆ. ಈ ಘಟನೆ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಸಮೀಪದ ಗರಗ ಗ್ರಾಮದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಮರಿಯಮ್ಮನಹಳ್ಳಿ ಹತ್ತಿರದ ಗರಗ ಗ್ರಾಮದ ರೈತ ಮೇದಾರ ನಿಂಗಪ್ಪ ಎಂಬುವರು ಜಮೀನಿನ ಕೆಲಸಕ್ಕೆ ಹೊಲಕ್ಕೆ ತೆರಳಿದ್ದರು. ಸಂಜೆ ಮನೆಗೆ ಹಿಂದಿರುಗುವ ಸಂದರ್ಭದಲ್ಲಿಯೇ ಜೋರು ಮಳೆ