ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಾದೇಶಿಕ ಪಕ್ಷವನ್ನ ಅಸ್ತಿತ್ವಕ್ಕೆ ತರಬೇಕಂತಾ ದಳಪತಿಗಳು ಸಾಕಷ್ಟು ಚಕ್ರವ್ಯೂಹ ರಚನೆ ಮಾಡ್ತಿದ್ದಾರೆ.ಜನತಾ ಮಿತ್ರ, ಜನತಾ ಜಲಧಾರೆ ಮೂಲಕ ಯಾತ್ರೆಗಳನ್ನ ಶುರು ಮಾಡಿದ ಕುಮಾರಸ್ವಾಮಿ ಇಗ ಪಂಚರತ್ನ ರಥಯಾತ್ರೆ ಮಾಡ್ತಿದ್ದಾರೆ. ಈಗಾಗಲೇ 93 ಅಭ್ಯರ್ಥಿಗಳ ಲಿಸ್ಟ್ ಸಿದ್ಧವಾಗ್ತಿದ್ದಂತೆ ಹಲವೆಡೆ ಅಸಮಧಾನಗಳು ಶುರುವಾಗ್ತಿದೆ. ಹಾಸನದಲ್ಲಿ ಟಿಕೆಟ್ ಗೊಂದಲದ ಬೆನ್ನಲ್ಲೇ ಇಗ ಮತ್ತೊಂದು ಕ್ಷೇತ್ರದಲ್ಲಿ ಹಾಲಿ ಶಾಸಕರ ವಿರುದ್ಧವೇ ಕಾರ್ಯಕರ್ತರ ಅಸಮಧಾನ ಶುರುವಾಗಿದೆ.