ಅಧಿಕಾರಿಗಳ ಮೇಲೆ ಸಿಎಂ ಬಸವರಾಜ್ ಬೊಮ್ಮಾಯಿಗೆ ನಿಯಂತ್ರಣವಿಲ್ಲದಂತಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ರೋಹಿಣಿ ಸಿಂಧೂರಿ ಹಾಗೂ ಡಿ.ರೂಪ ನಡುವಿನ ಕಿತ್ತಾಟ ವಿಚಾರಕ್ಕೆ ಪ್ರತಿಕ್ರಿಸಿದ ಕಾಂಗ್ರೆಸ್ ಅಧಿಕಾರಿಗಳ ಮೇಲೆ ಸಿಎಂ ಬಸವರಾಜ್ ಬೊಮ್ಮಾಯಿಗೆ ನಿಯಂತ್ರಣವಿಲ್ಲದಂತಾಗಿದೆ.ಅಧಿಕಾರಿಗಳಿಬ್ಬರು ಬೀದಿ ಜಗಳ ಆಡುತ್ತಿರುವಾಗ ಸರ್ಕಾರ ಮೂಕ ಪ್ರೇಕ್ಷಕನಂತೆ ಕುಳಿತಿದೆ.ಈ ಬೆಳವಣಿಗೆಗಳು ಸಿಎಂ ಅಸಾಮರ್ಥ್ಯ ಹಾಗೂ ಹೊಣೆಗೇಡಿತನವನ್ನು ಬಟಾಬಯಲಾಗಿಸಿದೆ.