ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್ ಕೆ ರಮೇಶ್ ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸೋಕೆ ಮುಂಚೆ ವಸಂತಪುರದ ವಸಂತ ವಲ್ಲಭ ದೇವಾಲಯ ಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ರು. ನೂರಾರು ಕಾರ್ಯಕರ್ತರು ಬೆಂಬಲಿಗರು, ಬೈಕ್ ಗಳಲ್ಲಿ ಆಗಮಿಸಿ ಆರ್ ಕೆ ರಮೇಶ್ ಪರವಾಗಿ ಜಯಘೋಷಗಳನ್ನ ಕೂಗಿದ್ರು. ಇನ್ನೂ ದೊಡ್ಡದಾದ ಸೇಬಿನಹಾರ ಹಾರವನ್ನು ಕ್ರೇನ್ ಮೂಲಕ ಹಾಕಿ ಭರ್ಜರಿಯಾಗಿ ಸ್ವಾಗತಿಸಿದರು. ನಂತರ ವಸಂತಪುರದಿಂದ ಬನಶಂಕರಿ ಮಾರ್ಗವಾಗಿ ತೆರಳಿದ್ರು