ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ಇಂದು ಸಾವಿರಾರು ಕಾರ್ಯಕರ್ತರು ಸೇರಿದಂತೆ ಕುಟುಂಬಸ್ಥರು, ಬೆಂಬಲಿಗರು ಸಾಥ್ ನೀಡಿದ್ರು.ನಾಮಪತ್ರ ಸಲ್ಲಿಸಿದ್ರು ಚುನಾವಣಾ ರಣರಂಗಕ್ಕೆ ಅಧಿಕೃತವಾಗಿ ಕಹಳೆ ಊದಿದ್ರು.. ಇದಕ್ಕೂ ಮೊದಲು ಇಗ್ಗಲೂರಿನ ದೇವಸ್ಥಾನ ಕ್ಕೆ ತೆರಳಿದ್ರು. ನಂತರ ಹೊಂಗಸದ್ರಕ್ಕೆ ಆಗಮಿಸಿ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕೋದಂಡರಾಮ ಸ್ವಾಮಿ ಪಾದದ ಬಳಿ ದಾಖಲೆಗಳನ್ನ ಇಟ್ಟು ಪೂಜೆ ಮಾಡಿಸಿದ್ರು. ಇದೇ ಸಂದರ್ಭ ದಲ್ಲಿ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತಿಯಿದ್ದರು.