Photo Courtesy: Twitterನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಿಕ್ಕ ಅಭೂತಪೂರ್ವ ಗೆಲುವು ಕಾಂಗ್ರೆಸ್ ಉತ್ಸಾಹವನ್ನು ಹೆಚ್ಚು ಮಾಡಿದೆ.ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕದಂತಹ ಪ್ರಮುಖ ರಾಜ್ಯದಲ್ಲಿ ಸಿಕ್ಕ ಗೆಲುವು ಕಾಂಗ್ರೆಸ್ ಶಕ್ತಿ ಹೆಚ್ಚು ಮಾಡುವುದು ಖಂಡಿತಾ. ಇದು ಸ್ಥಳೀಯ ನಾಯಕತ್ವದ ಮೇಲೆ ನಂಬಿಕೆಯಿಟ್ಟು ಜನತೆ ನೀಡಿದ ತೀರ್ಪು ಎಂದರೂ ತಪ್ಪಾಗಲಾರದು.ಈ ಭರ್ಜರಿ ಗೆಲುವಿನ ಖುಷಿಯನ್ನು ಕಾಂಗ್ರೆಸ್ ದೆಹಲಿಯ ಕಚೇರಿಯಲ್ಲಿ ಸಂಭ್ರಮಿಸಿದೆ. ಈ ವೇಳೆ ಪಕ್ಷದ ಕಾರ್ಯಕರ್ತರು ‘ಜೈ ಬಜರಂಗಬಲಿ’ ಎಂದು ಘೋಷಣೆ