ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ ಹೊತ್ತಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಮತ್ತೊಂದು ಭ್ರಷ್ಟಾಚಾರದ ಅಸ್ತ್ರವನ್ನು ಕಾಂಗ್ರೆಸ್ ಪ್ರಯೋಗಿಸಿದೆ. ಭ್ರಷ್ಟಾಚಾರದ ರೇಟ್ ಕಾರ್ಡ್ ಪ್ರಕಟಿಸಿ, ಡಬಲ್ ಎಂಜಿನ್ ಸರ್ಕಾರವನ್ನು ಟ್ರಬಲ್ ಎಂಜಿನ್ ಸರ್ಕಾರ ಎಂದು ಕಾಂಗ್ರೆಸ್ ವ್ಯಂಗ್ಯ ಮಾಡಿದೆ. ವಿವಿಧ ಇಲಾಖೆಗಳ ನೇಮಕಾತಿ ದರ ಪ್ರಕಟಿಸಿ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ. 40 ಪರ್ಸೆಂಟ್ ಸರ್ಕಾರದಲ್ಲಿ ಎಲ್ಲವೂ ಮಾರಾಟವಾಗಿದೆ. ನೇಮಕಾತಿಗಳಲ್ಲಿ ಅಕ್ರಮ, ಸಿಎಂ ಸ್ಥಾನಕ್ಕೂ ದರ ನಿಗದಿಯಾಗಿದೆ ಎಂದು