ಕಾಂಗ್ರೆಸ್ ಪಕ್ಷಕ್ಕೂ ವೀರಶೈವ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ಕೆಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ಬಿಜೆಪಿ ಪ್ರಯತ್ನಗಳು ವಿಫಲವಾಗಲಿವೆ. ರಾಜ್ಯದ ಜನತೆಗೆ ಸತ್ಯ ಏನೆಂದು ತಿಳಿದಿದೆ ಎಂದರು. ಧರ್ಮಗಳನ್ನು ಒಡೆದು ಆಳುವುದು ಕಾಂಗ್ರೆಸ್ ಕಾಯಕವಲ್ಲ. ಅದು ಬಿಜೆಪಿ ಕಾಯಕ. ಮೊದಲಿನಿಂದಲೂ ಬಿಜೆಪಿ ಇದನ್ನೇ ಮಾಡುತ್ತಿದೆ ಎಂದು ಆರೋಪಿಸಿದರು. ಕಳೆದ ನಾಲ್ಕು ವರ್ಷಗಳಿಂದ