ಸರಕಾರ ನಡೆಸಲು ಬಿಜೆಪಿ ಬಿಡ್ತಿಲ್ಲ ಎಂದ ಕಾಂಗ್ರೆಸ್

ಕಲಬುರಗಿ, ಬುಧವಾರ, 15 ಮೇ 2019 (15:22 IST)

ರಾಜ್ಯದಲ್ಲಿ ಜಾತ್ಯಾತೀತ ತತ್ವದ ಮೇಲೆ ನಂಬಿಕೆಯಿರುವ ಪಕ್ಷಗಳ ಅಸ್ತಿತ್ವದಲ್ಲಿದೆ. ಆದರೆ ಬಿಜೆಪಿ ರಾಷ್ಟ್ರ ಹಾಗೂ ರಾಜ್ಯ ನಾಯಕರು ಸರಕಾರದ ವಿರುದ್ಧ ಅಪಪ್ರಚಾರ ಮಾಡುತ್ತಾ ಸರಕಾರ ನಡೆಸಲು ಬಿಡುತ್ತಿಲ್ಲ ಎಂದು ಕಾಂಗ್ರೆಸ್ ದೂರಿದೆ.

ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಅಭಿವೃದ್ದಿ ಕೆಲಸ ಜಾರಿಗೆ ತರಲಾಗುತ್ತಿದೆ.  ಆದರೆ, ಸುಳ್ಳು ಹೇಳುವುದನ್ನೇ ಮೈಗೂಡಿಸಿಕೊಂಡಿರುವ ಬಿಜೆಪಿ ರಾಷ್ಟ್ರ ಹಾಗೂ ರಾಜ್ಯ ನಾಯಕರು ಸರಕಾರದ ವಿರುದ್ದ ಅಪಪ್ರಚಾರ ಮಾಡುತ್ತಾ ಸರಕಾರ ನಡೆಸಲು ಬಿಡುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.  

ಚಿಂಚೋಳಿಯಲ್ಲಿ ಏರ್ಪಡಿಸಲಾಗಿದ್ದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಬಿಜೆಪಿಯವರು ಏನೆಲ್ಲ ಅಡ್ಡಿಪಡಿಸಿದರೂ  ಸರಕಾರ ಸುಭದ್ರವಾಗಿದ್ದು ತನ್ನ ಅವಧಿ ಮುಗಿಸಲಿದೆ ಎಂದ್ರು.

ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ರಾಷ್ಟ್ರ ಹಾಗೂ ರಾಜ್ಯ ನಾಯಕರು ರಾಠೋಡ್ ಬೆನ್ನಿಗಿದ್ದೇವೆ. ಮಲ್ಲಿಕಾರ್ಜು‌ನ ಖರ್ಗೆ ಸಾಹೇಬರಂತಹ ರಾಷ್ಟ್ರಮಟ್ಟದ ನಾಯಕರ ಮಾರ್ಗದರ್ಶನ ಅವರಿಗಿದೆ.

ಹಾಗಾಗಿ ಜನಪರ ಹೋರಾಟಗಾರ ರಾಠೋಡ್ ಗೆಲ್ಲುತ್ತಾರೆ. ಜಾಧವ್ ಅವರ ಮಗ ಅವಿನಾಶ್ ಸೋಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯಡಿಯೂರಪ್ಪ ಮನೆ ಮುಂದೆ ವಾಚಮನ್ ಆಗ್ತೀನಿ ಎಂದ ಜಮೀರ್

ಮೇ 23 ರ ಲೋಕ ಫಲಿತಾಂಶ ನಂತರ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಮಾಡಿದರೆ ನಾನು ಯಡಿಯೂರಪ್ಪರ ಮನೆ ಮುಂದೆ ...

news

ಸಿದ್ದರಾಮಯ್ಯ ಚೇಲಾಗಳು ಸೋಬಾನೆ ಪದ ಹಾಡುತ್ತಿದ್ದಾರಂತೆ…

ಮತ್ತೊಮ್ಮೆ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಕ್ಕಾಗಿ ಅವರ ಚೇಲಾಗಳು ಸೋ… ಅಂತ ಸೋಬಾನೆ ಪದ ...

news

ಹೆಚ್.ವಿಶ್ವನಾಥ್ ಗೆ ಬಾಯಿಚಪಲ; ಏನೇನೋ ಮಾತಾಡ್ತಾರೆ…

ಜೆಡಿಎಸ್ ನ ರಾಜ್ಯ ಅಧ್ಯಕ್ಷರಾಗಿರುವ ಹೆಚ್.ವಿಶ್ವನಾಥ್ ವಿರುದ್ಧ ಸಚಿವರೊಬ್ಬರು ಖಾರವಾಗಿ ಟಾಂಗ್ ...

news

ಈಶ್ವರಪ್ಪಗೆ ಗಂಡಸ್ತನದ ಬಗ್ಗೆ ಗೊತ್ತಿಲ್ಲ ಎಂದ ಸಂಸದ

ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪಗೆ ಕೈ ಪಡೆಯ ಸಂಸದ ಖಡಕ್ ಟಾಂಗ್ ನೀಡಿದ್ದಾರೆ.