ಬಿಬಿಎಂಪಿಯ 51ನೇ ಮೇಯರ್ ಆಗಿ ಸಂಪತ್ರಾಜ್, ಉಪಮೇಯರ್ ಆಗಿ ಪದ್ಮಾವತಿ ನರಸಿಂಹಮೂರ್ತಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರೆ, ಸಿಡಿಸಿದ ಪಟಾಕಿಯ ಕಸ ಗುಡಿಸಿ ಬಿಜೆಪಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ. ಬಿಬಿಎಂಪಿ ಕಚೇರಿಯ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ನಾಯಕನ ಆಯ್ಕೆಯ ಸಂಭ್ರಮಾಚರಣೆಯಲ್ಲಿ ತೊಡಗಿ ಮನಬಂದಂತೆ ಪಟಾಕಿ ಸಿಡಿಸಿದ್ದರಿಂದ ಭಾರಿ ಕಸ ಬಿದ್ದಿತ್ತು. ಬಿಬಿಎಂಪಿ ಮೇಯರ್ ಆಯ್ಕೆ ವಿರೋಧಿಸಿ ಸಭಾತ್ಯಾಗ ಮಾಡಿದ್ದ ಬಿಜೆಪಿ ಸದಸ್ಯರು ಕಸ